AwwaBooks
ಪುಟಾಣಿ ಭಾರತೀಯರು- ದೇಶದ ವಿವಿಧ ಪ್ರದೇಶಗಳ ಕಥೆಗಳು
ಪುಟಾಣಿ ಭಾರತೀಯರು- ದೇಶದ ವಿವಿಧ ಪ್ರದೇಶಗಳ ಕಥೆಗಳು
Regular price
Rs. 265.00
Regular price
Sale price
Rs. 265.00
Unit price
/
per
ಭೇಡಾಘಾಟ್ ನಲ್ಲಿ ನಿಜವಾಗಿಯೂ ವಜ್ರಗಳು ಅಡಗಿವೆಯೇ? ಪುಟ್ಟ ಸಿಬ್ಸಾಳ ಮ್ಯಾಜಿಕ್ ಹಾಸುಗಂಬಳಿ ಅವಳನ್ನು ತವಾಂಗ್‌ನಿಂದ ಹೊರಗೆ ಹಾರಿಸುತ್ತದೆಯೇ? ಅಂಡಮಾನ್‌ನಲ್ಲಿ ದೋಣಿ ವಿಹಾರದ ಸಮಯದಲ್ಲಿ ಮೊಸಳೆಗಳು ಕಣ್ಮಣಿ ಮತ್ತು ಅವಳ ಸ್ನೇಹಿತರ ಗುಂಪನ್ನು ಬೆನ್ನಟ್ಟಿದಾಗ ಏನಾಗುತ್ತದೆ? ಕರ್ನಾಟಕದ ವೀರಗಲ್ಲುಗಳ ಬಗ್ಗೆ ನಿಮಗೆ ತಿಳಿದಿದೆಯೇ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಾ ಕತ್ತೆ ಏನು ಮಾಡುತ್ತಿದೆ? ವಿಶ್ವದ ಅತಿ ಎತ್ತರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಿಮಾಚಲದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಗೋವಾದಲ್ಲಿ ಮಾತ್ರ ಮೋಟಾರ್ ಸೈಕಲ್ ಟ್ಯಾಕ್ಸಿಗಳಿವೆಯೇ? ಅಥವಾ ಡೈನೋಸಾರ್‌ಗಳು 65 ಮಿಲಿಯನ್ ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಬದುಕಿದ್ದವೇ?
ಕಥೆಗಳು ಮತ್ತು ಆಕರ್ಷಕ ಸಂಗತಿಗಳು ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಒಂದು ಅದ್ಭುತ ಸವಾರಿಗೆ ಕರೆದೊಯ್ಯುತ್ತವೆ. ಅವು ಜಿಗ್ ಸಾ ಪಜಲ್ ನ ತುಂಡುಗಳಂತೆ ತುಂಬಾ ವಿಭಿನ್ನವಾಗಿ ಕಂಡರೂ ನಮ್ಮ ಭವ್ಯವಾದ ಅಖಂಡ ಭಾರತವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ.

Author: ಪಿಕಾ ನಾನಿ
Illustrations: ಶ್ರೇಯಾ ಮೆಹ್ತಾ ಮತ್ತು ಭೀಮಸೇನ ನಾಯಿಕ್
ಕನ್ನಡಕ್ಕೆ: ಡಾ।। ಹೆಚ್. ವಿ. ಶ್ರೀನಿವಾಸಮೂರ್ತಿ ಮತ್ತು ಅಪೂರ್ವ
Age group: 10+
Pages:144
'ಪಿಕಾ ನಾನಿ' ಎಂಬುದು ದೀಪಿಕಾ ಮೂರ್ತಿಯವರ ಕಾವ್ಯನಾಮ. ಅವರು ಇಂಗ್ಲಿಷಲ್ಲಿ ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಮೊದಲ ಪುಸ್ತಕ, ಲಿಟಲ್ ಇಂಡಿಯನ್ಸ್ 2013 ರಲ್ಲಿ ಬಿಡುಗಡೆಯಾಯಿತು ಮತ್ತು ಸ್ವಲ್ಪ ಸಮಯದಲ್ಲಿಯೇ ಬೆಸ್ಟ್ ಸೆಲ್ಲರ್ ಆಯಿತು. ಈ ಪುಸ್ತಕದ ಐದು ಕಥೆಗಳನ್ನು ICSE ಮತ್ತು NCERT ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ.
Share
No reviews